Books Distribution
ಜುಲೈ. 15 ನೇ ರವಿವಾರ ರಂದು ಬಿಲ್ಲವರ ಎಸ್ಸೋಸಿಯೇಶನ್ ಮುಂಬಯಿ ಇವರ ಘಾಟಕೋಪರ ಸ್ಥಳೀಯ ಕಚೇರಿಯಲ್ಲಿ ಬಡ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಈ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದ ಮೊದಲು ಬಿಲ್ಲವ ಎಸ್ಸೋಸಿಯೇಶನ್ ಮುಂಬಯಿಯ ಮಾಜಿ ಅಧ್ಯಕ್ಷರಾದ ಶ್ರೀ ನಿತ್ಯಾನಂದ್ ಕೋಟ್ಯಾನ, ಶಿಕ್ಷಣ ಸಮಿತಿಯ ನೂತನ ಅಧ್ಯಕ್ಷರಾದ ಶ್ರೀ ವಿಶ್ವನಾಥ ತೋನ್ಸೆ ಹಾಗೂ ಘಾಟಕೋಪರ ಸ್ಥಳೀಯ ಕಾರ್ಯಾಧ್ಯಕ್ಷರಾದ ಶ್ರೀ ಡಿ. ಕೆ. ಪೂಜಾರಿಯವರು ದ್ವೀಪ ಪ್ರಜ್ವಲನ ಹಾಗೂ ಅಮಿತ ಬಂಗೇರ ಮತ್ತು ಶ್ರುತಿ ಪೂಜಾರಿಯ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಶುರುವಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬಿಲ್ಲವರ ಎಸ್ಸೋಸಿಯೇಶನ್ ಮುಂಬಯಿಯ ಮಾಜಿ ಅಧ್ಯಕ್ಷರಾದ ಶ್ರೀ ನಿತ್ಯಾನಂದ್ ಕೋಟ್ಯಾನ ಇವರು ವಹಿಸಿದರು. ಘಾಟಕೋಪರ ಸ್ಥಳೀಯ ಕಾರ್ಯಾಧ್ಯಕ್ಷರಾದ ಡಿ ಕೆ ಪೂಜಾರಿ ಯವರು ಬಿಲ್ಲವರ ಎಸ್ಸೋಸಿಯೇಶನ್ ಮುಂಬಯಿಯ ಮಾಜಿ ಅಧ್ಯಕ್ಷ ಹಾಗೂ ಶಿಕ್ಷಣ ಸಮಿತಿಯ ನೂತನ ಅಧ್ಯಕ್ಷರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ತೋನ್ಸೆ ತಮ್ಮ ಭಾಷಣದಲ್ಲಿ ಅವರು ವಿದ್ಯಾರ್ಥಿಗಳು ಅವರ ಹ್ಯಾಂಡ್ ರೈಟಿಂಗ್ ಚೆನ್ನಾಗಿ ಮಾಡಿ ಬರೆಯ ಬೇಕು ಹಾಗೆಯೇ ಪುಸ್ತಕಗಳನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿ ತಮ್ಮ ವಿಧ್ಯಭಾಷಕ್ಕೆ ಇನ್ನಷ್ಟು ಗಮನ ನೀಡಬೇಕೆಂದು ಹೇಳಿದರು. ಆನಂತರ ಘಾಟಕೋಪರ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ಶ್ರೀ ಡಿ. ಕೆ. ಪೂಜಾರಿಯವರು ಕಾರ್ಯಕ್ರಮದಲ್ಲಿ ಬಂದ ಎಲ್ಲ ಶಾಲಾ ಮಕ್ಕಳಿಗೆ ಸಂಬೋದಿಸಿ ಒಮ್ಮೆ ವಿದ್ಯಾರ್ಥಿಗಳು ನಿರ್ದಾರಿಸಿದ್ದರೆ ನಾನು ಡಾಕ್ಟರ್, ಇಂಜಿನಿಯರ ಆಗುತ್ತೇನೆ ಅದು ಅವನು ಆಗೆ ಆಗುತ್ತಾನೆ ಹಾಗೆಯೇ ವಿದ್ಯಾರ್ಥಿಗಳ ಮುಂದಿನ ವಿಧ್ಯಭಾಷಕ್ಕೆ ತಾವು ಇನ್ನಷ್ಟು ಸಹಾಯ ಮಾಡುತ್ತೇನೆ ಎಂದು ಹೇಳಿದರು. ಸಭಾ ಕಾರ್ಯಕ್ರಮದ ಭಾಷಣದಲ್ಲಿ ಘಾಟಕೋಪರ ಸ್ಥಳೀಯ ಕಚೇರಿಯ ಪುರೋಹಿತರಾದ ಶ್ರೀ ಹರಿಶ್ ಶಾಂತಿ ಹಾಗೂ ಮಹಿಳಾ ಸದಸ್ಯ ವಿಮಲ ಬಂಗೇರ ತಮ್ಮ ಅಭಿಪ್ರಾಯ ನೀಡಿ ಬಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕೊನೆಗೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ನಿತ್ಯಾನಂದ್ ಕೋಟ್ಯಾನ್ ತಮ್ಮ ಭಾಷಣದಲ್ಲಿ ಶ್ರೀ ಡಿ. ಕೆ. ಪೂಜಾರಿಯವರನ್ನು ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳ ವ್ಯವಸ್ಥೆ ಮಾಡಿದಕ್ಕೆ ಪ್ರಸಂಸಿದ್ದರು ಹಾಗೆಯೇ ಈ ಪುಸ್ತಕಗಳನ್ನು ಬ್ರಹ್ಮಶ್ರೀ ನಾರಾಯಣ ಗುರುವಿನ ಪ್ರಸಾದವೆಂದು ಎನ್ನಬೇಕು ಎಂದು ಬಂದ ಎಲ್ಲ ವಿದ್ಯಾರ್ಥಿಗಳಿಗೆ ಹೇಳಿದರು. ಸಭಾ ಕಾರ್ಯಕ್ರಮದ ಮುಕ್ತಾಯವು ಉಪ ಕೋಶದಿಕಾರಿಯಾದ ಶ್ರೀ ಶಿವಪ್ಪ ಪೂಜಾರಿ ಮಾಡಿದರು.ಕಾರ್ಯಕ್ರಮದ ಎಲ್ಲ ನಿರೂಪನೆಯು ಹಿರಿಯ ಸದಸ್ಯರಾದ ಶ್ರೀ ಗಣೇಶ ಸಾಲ್ಯಾನ್ ಮಾಡಿದರು ಹಾಗೂ ಅವರಿಗೆ ಕೋಶದಿಕಾರಿಯಾದ ಶ್ರೀ ಅಶೋಕ್ ಪೂಜಾರಿ ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಗೆ ಬಂದ ಅತಿಥಿಗಳಿಂದ ಹಾಗೂ ಸ್ಥಳೀಯ ಕಾರ್ಯಾಧ್ಯಕ್ಷರಿಂದ ಪುಸ್ತಕಗಳನ್ನು ವಿತರಿಸಲಾಯಿತು ಹಾಗೂ ಅವರಿಗೆ ಸ್ಥಳೀಯ ಕಚೇರಿಯ ಎಲ್ಲ ಸಮಿತಿ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದವರು ಸಹಕರಿಸಿದರು. ಈ ಪುಸ್ತಕ ವಿತರಣೆ ಹಾಗೂ ಬಂದ ಮಕ್ಕಳಿಗೆ ತಿಂಡಿಯ ಎಲ್ಲ ವ್ಯವಸ್ಥೆಯು ಘಾಟಕೋಪರ ಸ್ಥಳೀಯ ಕಾರ್ಯದ್ಯಕ್ಶರಾದ ಶ್ರೀ ಡಿ. ಕೆ. ಪೂಜಾರಿಯವರು ಮಾಡಿದರು.